( 4 Oct, 2015) ಕಲಚೂರಿಗಳು Published By : upscgk.com ಕಲಚೂರಿಗಳು 1. ಇವರ ಮೂಲ ಪುರುಷ - ಬಿಜ್ಜಳ 2. ಇವನ ಆಸ್ಥಾನದ ಮಂತ್ರಿ - ಬಸವಣ್ಣ 3. ಬಸವಣ್ಣ ನವರನ್ನ ಶಾಸನಗಳಲ್ಲಿ “ ಮಹೇಶ್ವರ ” ಎಂದು ಕರೆಯಲಾಗಿದೆ 4. ಇವರು ಮೂಲತಃ ಬುಂದೇಲ್ ಖಂಡದವರು 5. ಬಿಜ್ಜಳನ ಬಿರುದುಗಳು - ತ್ರಿಭುವನ ಮಲ್ಲ , ಭುಜ ಬಲ ಚಕ್ರವರ್ತಿ , ಕಲಚೂರಿ ಚಕ್ರವರ್ತಿ 6. ಸೋಮೇಶ್ವರ - ಬಿಜ್ಜಳನ ಮೊದಲ ಮಗ 7. ಈತನ ಇನ್ನೋಂದು ಹೆಸರು - ಸೋಮದೇವ 8. ಸೋಮೇಶ್ವರನ ಬಿರುದು - ರಾಯಮುರಾರಿ 9. ಕಲಚೂರಿ ಪದ ಮೂಲತಃ ಬುಂದೇಲ್ ಖಂಡದ “ ಕಲಿಂಜರ್ ” ದಿಂದ ಬಂದಿದೆ 10. ಕಲಚೂರಿಗಳ ಮೂಲ ರಾಜಧಾನಿ - ಕಲಿಂಜರಿ ಪುರ 11. ಕಲಚೂರಿ ಸಾಮ್ರಾಜ್ಯದ ಸ್ಥಾಪಕ - ಎರಡನೇ ಬಿಜ್ಜಳ 12. ಕಲಚೂರಿಗಳ ಲಾಂಛನ - ನಂದಿ ( ವೃಷಭ ) 13. ಬಸವೇಶ್ವರರ ಜನ್ಮ ಸ್ಥಳ - ಬಾಗೇವಾಡಿ ಅಥವಾ ಬಸವನ ಬಾಗೇವಾಡಿ 14. ಬಸವೇಶ್ವರರು ಪುನರುತ್ಥಾನಗೊಳಿಸಿದ ಮತ - ವೀರಶೈವ ಧರ್ಮ 15. ಬಸವಣ್ಣನ ಅಂಕಿತ - ಕೂಡಲ ಸಂಗಮದೇವ 16. ಕಲ್ಯಾಣ ಇರುವ ಜಿಲ್ಲೆ - ಇಂದಿನ ಬಿಜಾಪುರ 17. ಬಸವೇಶ್ವರರು ಪ್ರಚುರ ಪಡಿಸಿದ ತತ್ವ - ಶಕ್ತಿ ವಿಶಿಷ್ಟಾದ್ವೈತ 18. ಬಸವಣ್ಣನ ತಂದೆ ತಾಯಿ - ಮಾದರಸ ಮತ್ತು ಮಾದಲಾಂಬಿಕೆ 19. ಅನುಭವ ಮಂಟಪದ ಸ್ಥಾಪಕರು - ಬಸವಣ್ಣ 20. ಕಲ್ಯಾಣಿ ಕಲಚೂರ್ಯರ ವಂಶ - ಹೈಹಯ ವಂಶ , ಇವರು ಮೂಲತಃ ಇತ್ತರ ಭಾರತದವರು 21. ಕಲಚೂರ್ಯರ ಆರಂಭದ ರಾಜಧಾನಿ - ಮಂಗಳವಾಡ 22. ಬಿಜ್ಜಳನ ಸೇನಾ ದಂಡ ನಾಯಕ - ಕಸಪಯ್ಯ 23. ಬಿಜ್ಜಳನನ್ನ ಕೊಂದವರು - ಜಗದೇವದಣ್ಣಾಯಕ ಬೊಮ್ಮರಸ ಮತ್ತು ಮಲ್ಲಿದೇವ 24. ಕಲಚೂರಿಗಳ ಕೊನೆಯ ಅರಸ - ಸಿಂಘಣ